ಅಂಕೋಲಾ: ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಅವ್ಯಾಚ್ಯವಾಗಿ ನಿಂದಿಸಿದವನ ಮೇಲೆ ಅಂಕೋಲಾ ಜಿಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಸುಂಕಸಾಳದ ಸಂದೀಪ ಅಶೋಕ ನಾಯ್ಕ ಮೇಲೆ ದೂರು ದಾಖಲಾಗಿದ್ದು ಸುಂಕಸಾಳದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮೀಜಾ ರಾಜಸಾಹೇಬ ಸೈಯದ್ ದೂರು ನೀಡಿದ್ದಾರೆ. ಆರೋಪಿಯು ಹಿಂದಿನಿಂದಲೂ ರಮೀಜಾ ಅವರಿಗೆ ನಿಂದಿಸುತ್ತಾ ಬಂದಿದ್ದು ಜುಲೈ 2ರಂದು ಅವರು ಪಂಚಾಯತ್ ಕಚೇರಿಗೆ ತೆರಳುವಾಗ ಜನರಿಗೆ ಕೇಳುವಂತೆ ಕೆಟ್ಟ ಶಬ್ದಗಳಿಂದ ಬೈಯುತ್ತಾ ಪ್ರಾಣಿಗಳ ಹೆಸರು ಬಳಕೆ ಮಾಡಿಕೊಂಡು ನಿಂದಿಸಿದ್ದಾನೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಇವರಿಗೆ ಭಿಕ್ಷುಕಿ ಎಂದು ನಿಂದಿಸಿದ್ದು ಸಂದೀಪ ಮೇಲೆ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.