Flash News
Sunday, November 15, 2026
Logo Flash News
Sunday, November 15, 2026
Logo
ಮಹಿಳೆಯ ಕೊಲೆಗೈದು ಚಿನ್ನಾಭರಣ ದೋಚಿದ ಆರೋಪಿ ಬಂಧನ

ಮಹಿಳೆಯ ಕೊಲೆಗೈದು ಚಿನ್ನಾಭರಣ ದೋಚಿದ ಆರೋಪಿ ಬಂಧನ

November 14, 2026   |   Flash News

ಮುಂಡಗೋಡ: ರಾತ್ರಿಯ ವೇಳೆ ತನ್ನ ಮನೆಯಲ್ಲಿ ಮಲಗಿದ್ದ ವೃದ್ಧೆ ಮುಂಜಾನೆ ಮೃತಪಟ್ಟಿದ್ದರು. ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿದ್ದವು. ಯಾವುದೇ ಕುರುಹುಗಳಿಲ್ಲ. ಆದರೂ ಕಮಲವ್ವನನ್ನು ಕಳೆದುಕೊಂಡ ಮಗ ರಾಘವೇಂದ್ರ ಸಾವಿನಲ್ಲಿ ಸಂಶಯವಿದೆ ಎಂದು ಅಕ್ಟೋಬರ್ 26 ರಂದು ದೂರು ದಾಖಲಿಸಿದ್ದರು. 

ತನಿಖೆ ಕೈಗೊಂಡ ಪೊಲೀಸರಿಗೆ ಇದೊಂದು ಸವಾಲಿನ ಕಾರ್ಯವಾಗಿತ್ತು. ರಥ ದೇಹದ ಮೇಲೆ ಯಾವುದೇ ಗಾಯಗಳಾಗಲಿ ಇನ್ನಿತರ ಕುರುಹುಗಳಾಗಲಿ ಪತ್ತೆಯಾಗಲಿಲ್ಲ. ಸಿಸಿಟಿವಿ ದೃಶ್ಯಗಳು, ಸಿಡಿಆರ್ ಮತ್ತು ತಾಂತ್ರಿಕ ಸಾಕ್ಷಾಧಾರಗಳು ಲಭ್ಯವಾಗಲಿಲ್ಲ. ಇತ್ತ ಆರೋಪಿಯನ್ನು ಬಂಧಿಸುವಂತೆ ಸಾರ್ವಜನಿಕರ ಒತ್ತಡ ಹೆಚ್ಚಾಗಿದ್ದು ಕೊನೆಗೂ ಪೊಲೀಸರು ಚಾಣಾಕ್ಷತನದಿಂದ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಹಾಗೂ ಮೋಟರ್ ಸೈಕಲ್ ವಶ ಪಡಿಸಿಕೊಂಡಿದ್ದಾರೆ. ಆರೋಪಿ ಆಲಳ್ಳಿಯ ಮಾರುತಿ ಅಡಿವೆಪ್ಪ ಮೂಡಸಾಲಿಯನ್ನು ಸವಣೂರಿನಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಮೃತ ಮಹಿಳೆಯ ಚಿನ್ನಾಭರಣಗಳು ದೋಚಿದ ಕುರಿತು ಸ್ವ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. 

 ಎಸ್ ಪಿ ದೀಪನ್ ಎಮ್ ಎನ್, ಎಎಸ್ಪಿ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ದಕ್ಷ ಹಾಗೂ ಚಾಣಾಕ್ಷ ಅಧಿಕಾರಿಯಂದೇ ಹೆಸರಾದ, ತನಿಖೆಗೆ ರಾಜ್ಯಮಟ್ಟದಲ್ಲಿ ಉತ್ತಮ ನಿದರ್ಶನ ಎನ್ನುವಂತಿರುವ ಸಿಪಿಐ ರಮೇಶ್ ಹಾನಾಪೂರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಗೌಡ, ರವೀಂದ್ರ ಬಿರಾದಾರ್, ನಿಂಗರಾಜ್ ಕರಡಿಗುಡ್ಡಿ, ಸಿಬ್ಬಂದಿ ಬಸವರಾಜ ಹಗರಿ, ಕೋಟೇಶ್ವರ ನಾಗರವಳ್ಳಿ, ಬಸವರಾಜ್ ಮ್ಯಾಗೇರಿ, ಅಣ್ಣಪ್ಪ ಗುಡಿಗೇರಿ, ತಿರುಪತಿ ಚೌಡಣ್ಣನವರ್, ಶಿವರಾಜ್ ಮಾಳಪ್ಪನವರ್ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳುವಲ್ಲಿ ಕಾರ್ಯನಿರ್ವಹಿಸಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.