ಅಂಕೋಲಾ: ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನವನ್ನು ತಾಲೂಕಿನ ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಆಯೋಜನೆ ಮಾಡಿದ್ದು, ನಿಗದಿತ ಅವಧಿ ಮೀರಿದರೂ ಚಾಲನೆ ದೊರೆಯದ ಹಿನ್ನೆಲೆ ಅನೇಕ ಸಾರ್ವಜನಿಕರು ವಾಪಸ್ ಆಗಿದ್ದಾರೆ. ಶಾಸಕರು ಸಭೆಯನ್ನು ಉದ್ಘಾಟಿಸಬೇಕಾಗಿತ್ತಾದರೂ ಸಮಯ 12.30 ಆದರೂ ಇದುವರೆಗೆ ಆಗಮಿಸಿಲ್ಲ. ಮುಂಜಾನೆಯಿಂದ ವಿದ್ಯಾರ್ಥಿಗಳು ಕಾದು ಕುಳಿತರೂ ಸಭೆ ಆರಂಭವಾಗುವ ಮುನ್ಸೂಚನೆ ಇಲ್ಲ. ಪ್ರಚಾರದ ಕೊರತೆಯು, ಕಾಟಾಚಾರಕ್ಕೆ ಸಭೆ ಆಯೋಜಿಸಲಾಗಿದೆಯೋ ತಿಳಿಯದು. ಆಹವಾಲು ಸಲ್ಲಿಸಲು ಬಂದಿರುವ ಸಾರ್ವಜನಿಕರಿಗಿಂತ ಎರಡು ಪಟ್ಟು ಅಧಿಕಾರಿಗಳೇ ಸಭೆಯಲ್ಲಿದ್ದು ಇದು ನಾಮಕಾವಸ್ಥೆ ಸಭೆ ಎಂದು ಆಡಿಕೊಳ್ಳುವಂತಾಗಿದೆ.