ಗೋಕರ್ಣ: ದೇವಸ್ಥಾನದ ಅಡುಗೆಭಟ್ಟದ ಮೇಲೆ ಸಿಟ್ಟಿನಿಂದ ಇದ್ದ ವ್ಯಕ್ತಿಯೊಬ್ಬರು ಅನಗತ್ಯವಾಗಿ ತಗಾದೆ ತೆಗೆದು ತೆಂಗಿನ ಸೊಟ್ಟೆಯ ಏಟು ನೀಡಿದ್ದಾರೆ. ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನದಲ್ಲಿ ಹೊನ್ನಾವರ ಹಡಿನಬಾಳದ ಲಕ್ಷ್ಮೀನಾರಾಯಣ ರಾಮಕೃಷ್ಣ ಭಟ್ ಮುಖ್ಯ ಅಡಿಗೆ ಭಟ್ಟರಾಗಿ ಕೆಲಸ ಮಾಡುವಾಗಿನಿಂದಲೂ ಗೋಕರ್ಣದ ಗಜಾನನ ಭಾಗವತ್ ಅವರು ದ್ವೇಷ ಹೊಂದಿದ್ದರು. ಶನಿವಾರ ಲಕ್ಷ್ಮೀನಾರಾಯಣ ಅವರು ಅಮೃತಾನ್ನ ಪಕ್ಕದಲ್ಲಿರುವ ಸ್ನಾನಗ್ರಹದಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಕೈಯಲ್ಲಿ ಊಟದ ಸ್ಟೀಲ್ ತಟ್ಟೆಯನ್ನು ಹಿಡಿದುಕೊಂಡು ಬಂದ ಗಜಾನನ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಊಟದ ತಟ್ಟೆಯಿಂದ ಎರಡು ಬಾರಿ ತಲೆಯ ಮೇಲೆ ಹೊಡೆದರು. ಅಲ್ಲದೆ ಅಲ್ಲಿಯೇ ಬಿದ್ದಿದ್ದ ತೆಂಗಿನ ಗಿಡದ ಸೊಟ್ಟೆಯನ್ನು ತೆಗೆದುಕೊಂಡು ಲಕ್ಷ್ಮೀನಾರಾಯಣ ಅವರ ಬೆನ್ನಿನ ಮೇಲೆ ಎರಡು ಬಾರಿ ಹೊಡೆದು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಆಗಿರುವ ತೊಂದರೆಗೆ ಕ್ರಮ ಕೈಗೊಳ್ಳಲು ಲಕ್ಷ್ಮೀನಾರಾಯಣ ಅವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದೂರು ದಾಲಿಸಿರುವ ಗಜಾನನ ನಾರಾಯಣ ಭಾಗವತ್, ಹೊನ್ನಾವರದ ಲಕ್ಷ್ಮೀನಾರಾಯಣ ಭಟ್ಟರು ಗಜಾನನ ಭಾಗ್ವತ್ ಅವರ ಬಗ್ಗೆ ದೇವಸ್ಥಾನದಲ್ಲಿ ಬೇಡಿಕೊಂಡು ಜೀವನ ಮಾಡುತ್ತಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು ಎನ್ನುವುದನ್ನು ದೇವಾಲಯದ ಸಿಬ್ಬಂದಿ ವಿನಾಯಕ ಹೆಗಡೆ ಹೇಳಿದ್ದಾರೆ. ಮಹಾಬಲೇಶ್ವರ ದೇವಾಲಯದ ಅಮೃತಾನ್ನದಲ್ಲಿ ಬೆಳಗ್ಗೆ ಚಹಾ ತಿಂಡಿ ಮಾಡಲು ಹೋದ ಸಮಯದಲ್ಲಿ ಲಕ್ಷ್ಮೀನಾರಾಯಣ ಭಟ್ಟರಿಗೆ ವಿಚಾರಿಸಿದ್ದು ಆಗ ಅವಾಚ್ಯವಾಗಿ ನಿಂದಿಸಿ ಕೈಯಿಂದ ತಳ್ಳಿ, ಕಾಲಿನಿಂದ ಒದ್ದು ಸೌದೆ ಕಟ್ಟಿಗೆಯಿಂದ ಹೊಡೆದು ನೋವು ಪಡಿಸಿದ್ದಾರೆ ಎಂದು ದೂರಿದ್ದಾರೆ