ಗೋಕರ್ಣ: ಗಾಂಜಾ ಸೇವನೆಯ ಆರೋಪದಡಿ ಆಂಧ್ರಪ್ರದೇಶ ಮೂಲದ ಐ.ಟಿ ಕಂಪನಿ ಉದ್ಯೋಗಿ ಒಬ್ಬರನ್ನು ಪೊಲೀಸರು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಆಂಧ್ರಪ್ರದೇಶ ಮೂಲದ ಭಾನುಕಿರಣ ಭಾಸ್ಕರ ರಾವ್ ರುಪ್ಪಾ ಬಂದಿತ ಆರೋಪಿ. ಆರೋಪಿಯು ಮಾದಕ ವಸ್ತು ಸೇವನೆ ಮಾಡಿರುವ ಕುರಿತು ಅನುಮಾನಗೊಂಡ ಪೊಲೀಸರು ಅವನನ್ನು ವೈದ್ಯಕೀಯ ಪರೀಕ್ಷೆಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾದಕ ವಸ್ತು ಸೇವನೆ ಸಾಬೀತುಗೊಂಡ ಹಿನ್ನೆಲೆ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ದೈವಿಕ ಹಿನ್ನಲೆ ಹೊಂದಿರುವ ಗೋಕರ್ಣದಲ್ಲಿ ಇತ್ತೀಚಿಗೆ ಮಾದಕ ಸೇವನೆ, ಮಟ್ಕಾ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ಜರುಗುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.