Flash News
Saturday, February 14, 2026
Logo Flash News
Saturday, February 14, 2026
Logo
ಮುಂಡಗೋಡ: ಪೊಲೀಸ್ ಬಲೆಗೆ ಚರಸ್ ಮಾರಾಟಗಾರ

ಮುಂಡಗೋಡ: ಪೊಲೀಸ್ ಬಲೆಗೆ ಚರಸ್ ಮಾರಾಟಗಾರ

November 21, 2025   |   Crime

ಮಂಡಗೋಡ: ಮಾದಕ ದ್ರವ್ಯಗಳ ವಿರುದ್ಧದ ಕಾರ್ಯಾಚರಣೆ ಅಭಿಯಾನದ ಅಂಗವಾಗಿ ಮುಂಡಗೋಡ ಪೊಲೀಸರು ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಪಟ್ಟಣದಲ್ಲಿ ಚರಸ್ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ 8 ಲಕ್ಷ ಮೌಲ್ಯದ 781 ಗ್ರಾಮ್ ಚರಸ್ ವಶಪಡಿಸಿಕೊಂಡಿದ್ದಾರೆ. ಮುಂಡಗೋಡಿನ ಸುಭಾಷ್ ನಗರದ ಇಂಜಿನಿಯರ್ ಸಚಿನ್ ಟೇಕಬಹುದ್ದೂರ್ ಗೋರ್ಖಾ(26) ಬಂಧಿತ ಆರೋಪಿ. ಆರೋಪಿಯು ಮುಂಡಗೋಡ ನಗರದ ಬಸ್ ಡಿಫೋ ಹತ್ತಿರ ಬೈಕ್ ನಲ್ಲಿ ಚರಸ್ ಮಾರಾಟ ಮಾಡುವಾಗ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾಗೂ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರುರವರ ತಂಡದಿಂದ ಕಾರ್ಯಾಚರಣೆ ನಡೆದಿದ್ದು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.