Flash News
Friday, November 13, 2026
Logo Flash News
Friday, November 13, 2026
Logo
ಚಂಡೇಟಿಗೆ ಬದಲಾಗಿ ಕಲ್ಲೇಟು

ಚಂಡೇಟಿಗೆ ಬದಲಾಗಿ ಕಲ್ಲೇಟು

November 12, 2026   |   Ankola

ಅಂಕೋಲಾ: ವಿದ್ಯಾರ್ಥಿಯೊಬ್ಬ ಆಟ ಆಡುವಾಗ ಚಂಡು ತಗುಲಿದ್ದಕ್ಕೆ ಸಿಟ್ಟಾದ ವ್ಯಕ್ತಿ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಹಿಚ್ಕಡದಲ್ಲಿ ನಡೆದಿದೆ. ಇಲ್ಲಿನ ಗಿರೀಶ ನಾಗೇಶ ಆಗೇರ ಅವರ ಅಣ್ಣನ ಮಗ ಪ್ರೀತಮ್ ಹರೀಶ ಆಗೇರ ಸ್ನೇಹಿತರೊಂದಿಗೆ ಮನೆಯ ಎದುರಿನ ಮೈದಾನದಲ್ಲಿ ಆಟವಾಡುತ್ತಿದ್ದರು. ಆಕಸ್ಮಿಕವಾಗಿ ಚೆಂಡು ಅಲ್ಲಿನ ಧರ್ಮೇಂದ್ರ ನಾಗರಾಜ್ ಆಗೇರ ಅವರಿಗೆ ತಗುಲಿದೆ. ಇದರಿಂದ ಸಿಟ್ಟಾದ ಧರ್ಮೇಂದ್ರ, ಪ್ರೀತಮನಿಗೆ ಕಲ್ಲಿನಿಂದ ತಲೆಗೆ ಹೊಡೆದು ಗಾಯಪಡಿಸಿದ್ದಾರೆ. ಅದನ್ನು ಕೇಳಲು ಹೋದ ಗಿರೀಶ ನಾಗೇಶ ಆಗೇರ ಅವರಿಗೂ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹೋಗಿದ್ದಾರೆ ಎಂದು ಗಿರೀಶ್ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.