Flash News
Thursday, December 11, 2025
Logo Flash News
Thursday, December 11, 2025
Logo
ಅಂಕೋಲಾ: ದೇವಸ್ಥಾನಕ್ಕೆ ಅಕ್ರಮವಾಗಿ ನುಗ್ಗುತ್ತಿದ್ದವ ಪೊಲೀಸರ ವಶಕ್ಕೆ.

ಅಂಕೋಲಾ: ದೇವಸ್ಥಾನಕ್ಕೆ ಅಕ್ರಮವಾಗಿ ನುಗ್ಗುತ್ತಿದ್ದವ ಪೊಲೀಸರ ವಶಕ್ಕೆ.

October 04, 2025   |   Flash News

ಅಂಕೋಲಾ: ಕಳ್ಳತನ ಉದ್ದೇಶದಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದವನನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ ಘಟನೆ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ. 

ವ್ಯಕ್ತಿ ಒರಿಸ್ಸಾ ಮೂಲದವನು ಎಂದು ಹೇಳಿಕೊಂಡಿದ್ದು ಮೀನುಗಾರಿಕೆಗಾಗಿ ಇಲ್ಲಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇಲ್ಲಿನ ಪೂಜಗೇರಿಯ ರಣಮಾಸ್ತಿ ದೇವಾಲಯದ ಒಳಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನ ನಡೆಸುತ್ತಿದ್ದು ಮೊದಲಿಗೆ ಸ್ಕ್ರೂ ಡ್ರೈವರ್ ಮೂಲಕ ಬಾಗಿಲ ಬೀಗ ಮುರಿಯಲು ವಿಫಲಯತ್ನ ನಡೆಸಿದ್ದಾನೆ. ನಂತರ ದೇವಾಲಯದ ಹಿಂಭಾಗದಿಂದ ಸಿಮೆಂಟ್ ಕಿಡಕಿಯನ್ನು ಮುರಿಯಲು ಪ್ರಯತ್ನ ನಡೆಸಿದ ವೇಳೆಯಲ್ಲಿ ಸ್ಥಳೀಯರು ಗಮನಿಸಿ ವಿಚಾರಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2025 ಜನಮಾಧ್ಯಮ.. All Rights Reserved.