ಅಂಕೋಲಾ: ಪಟ್ಟಣದ ಸುಗಮ ಸಂಚಾರ ಹಿತ ದೃಷ್ಟಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಸಂಬಂಧ ಮತ್ತು ವಾಹನ ಪಾರ್ಕಿಂಗ್ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಪುರಸಭೆಯ ಮುಖ್ಯ ಅಧಿಕಾರಿ, ಪೊಲೀಸ್ ಉಪನಿರೀಕ್ಷಕರು ಮತ್ತು ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ಅಧಿಸೂಚನೆಯನ್ನು ಜಾರಿಗೆ ತರಲು ಆದೇಶಿಸಲಾಗಿದೆ. ಅಂಕೋಲಾ ಫಿಶ್ ಮಾರ್ಕೆಟ್ನಿಂದ ಕೇಣಿ ಕ್ರಾಸ್ ವರೆಗೆ ರಸ್ತೆ ಎಡ ಭಾಗದಲ್ಲಿ ಸೋಮವಾರ ಬುಧವಾರ ಶುಕ್ರವಾರ ಮತ್ತು ಬಲ ಭಾಗದಲ್ಲಿ ಮಂಗಳವಾರ ಗುರುವಾರ ಶನಿವಾರ ರವಿವಾರ ದ್ವಿಚಕ್ರ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಿದೆ. ಅಂಕೋಲಾ ಫಿಶ್ ಮಾರ್ಕೆಟ್ನಿಂದ ಕೇಣಿ ಕ್ರಾಸ್ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಇದೇ ರಸ್ತೆಯಲ್ಲಿ ಅಂಗಡಿಗಳಿಗೆ ಸಾಮಾನುಗಳನ್ನು ಇಳಿಸಲು ಬರುವ ಗೂಡ್ಸ್ ಗಾಡಿಗಳಿಗೆ ರಾತ್ರಿ 9:00 ಗಂಟೆಯಿಂದ ಬೆಳಗ್ಗೆ 8:00 ವರೆಗೆ ಮಧ್ಯಾಹ್ನ 1:30 ರಿಂದ 3 ಗಂಟೆಯವರೆಗೆ ಅವಕಾಶ ಕಲ್ಪಿಸಿದೆ. ಜೈ ಹಿಂದ್ ವ್ರತ್ತದಿಂದ ಗ್ರಂಥಾಲಯ ಕ್ರಾಸ್ ವರೆಗೆ ರಸ್ತೆಯ ಬಲ ಬದಿಗೆ ಸಂಪೂರ್ಣ ನಾಲ್ಕು ಚಕ್ರದ ವಾಹನಗಳಿಗೆ, ಬಸ್ ನಿಲ್ದಾಣದಿಂದ ಹರೀಶ್ ನಾಯಕ್ ಶೋರೂಂ ಹೋಗುವ ಎಡ ಭಾಗ ಅಂದರೆ ದ್ವಾರಕ ಫೈನಾನ್ಸ್ ನಿಂದ ಜನಪ್ರಿಯ ವೈನ್ಸ್ ವರೆಗೆ ಕಾರು ಪಾರ್ಕಿಂಗ್ ಅವಕಾಶ ಕಲ್ಪಿಸಿದೆ. ಅಂಬಾರಕೊಡ್ಲಾ ಕ್ರಾಸ್ ನಿಂದ ಬಿಲಾಲ್ ಮಸೀದಿ ಅವರಿಗೆ ರಸ್ತೆ ಬಲಭಾಗದಲ್ಲಿ ಕಾರು ಪಾರ್ಕಿಂಗ್ ಮತ್ತು ಎಡಭಾಗದಲ್ಲಿ ಬೈಕ್ ಪಾರ್ಕಿಂಗ್ ಅವಕಾಶ ಕಲ್ಪಿಸಿದೆ