Flash News
Saturday, August 15, 2026
Logo Flash News
Saturday, August 15, 2026
Logo

ಅಂಕೋಲಾ: ಲ್ಯಾಪ್ಟಾಪ್ ನೆಪದಲ್ಲಿ 3.75 ಲಕ್ಷ ರೂಪಾಯಿ ಪಂಗನಾಮ

October 30, 2025   |   Flash News

ಅಂಕೋಲಾ: ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಕೊಡಿಸುವುದಾಗಿ ಮುಂಗಡವಾಗಿ 3.75 ಲಕ್ಷ ರೂಪಾಯಿ ಹಣ ಪಡೆದು ಲ್ಯಾಪ್ಟಾಪ್ ನೀಡದೇ ಹಣ ಮರಳಿಸದೆ ವಂಚನೆ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವರ ಮೇಲೆ ದೂರು ದಾಖಲಾಗಿದೆ. ತಾಲೂಕಿನ ಬೆಳಂಬಾರ ಮಧ್ಯ ಖಾರ್ವಿವಾಡದ ಜಗದೀಶ ಯಶ್ವಂತ ಖಾರ್ವಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ ಸುಹಾಸ್ ಬಿ ಎಸ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಯು ದೂರುದಾರರು ಕಾಂಗ್ರೆಸ್ ಕಚೇರಿಯಲ್ಲಿದ್ದಾಗ ಕಚೇರಿಗೆ ಬಂದು ಸುಹಾಸ್ ಬಿಎಸ್ ಎಂದು ಪರಿಚಯಿಸಿಕೊಂಡು ಬೆಂಗಳೂರಿನಲ್ಲಿ ಎನ್.ಜಿ.ಓ ನಡೆಸುತ್ತಿದ್ದು ಕಡಿಮೆ ಬೆಲೆಗೆ ಎಲ್ಲಾ ಕಂಪನಿಯ ಲ್ಯಾಪ್ಟಾಪ್ಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ. ಅದನ್ನು ನಂಬಿದ ದೂರುದಾರ ಡೆಲ್ ಕಂಪನಿಯ 15 ಲ್ಯಾಪ್ಟಾಪ್ಗಳನ್ನು ಆರ್ಡರ್ ಮಾಡಿ ಮುಂಗಡವಾಗಿ ಆರೋಪಿಯ ಖಾತೆಗೆ ಹಣವನ್ನು ಸಂದಾಯ ಮಾಡಿದ್ದು ಇಲ್ಲಿಯವರೆಗೆ ಲ್ಯಾಪ್ಟಾಪ್ ನೀಡದೇ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.