ಅಂಕೋಲಾ: ತಾಲ್ಲೂಕಿನ ಬೆಳಸೆ ಹಂದಿಗದ್ದೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಗು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಬಸ್ ಕುಮಟಾದಿಂದ ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದು ಈ ವೇಳೆ ತಿರುವಿನಲ್ಲಿ ಅಂಕೋಲಾದಿಂದ ಕುಮಟಾ ಮಾರ್ಗವಾಗಿ ಬಂದ ಲಾರಿಗೆ ಡಿಕ್ಕಿಯಾಗಿ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.