Flash News
Tuesday, September 22, 2026
Logo Flash News
Tuesday, September 22, 2026
Logo
ಮಹಿಳೆಯರ ಮೇಲಿನ ಹಲ್ಲೆ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಎಂ.ಎಲ್.ಸಿ ಉಳ್ವೇಕರ

ಮಹಿಳೆಯರ ಮೇಲಿನ ಹಲ್ಲೆ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಎಂ.ಎಲ್.ಸಿ ಉಳ್ವೇಕರ

September 22, 2026   |   Flash News

ಯಲ್ಲಾಪುರ: ತಾಲ್ಲೂಕಿನಲ್ಲಿ ವ್ಯಾಪಾರಸ್ಥ ಮಹಿಳೆಯರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಎಂ.ಎಲ್.ಸಿ ಗಣಪತಿ ಉಳ್ವೇಕರ ಆಗ್ರಹಿಸಿದ್ದು ಈ ಸಂಬಂಧ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಹಲ್ಲೆಗೆ ಒಳಗಾದ ಮೀನುಗಾರ ಮಹಿಳೆಗೆ ಕರೆ ಮಾಡಿ ಮಾತನಾಡಿದ ಉಳ್ವೇಕರ, ಯಾವುದೇ ಕಾರಣಕ್ಕೂ ಭಯ ಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಅಧಿಕಾರಿ ಕರ್ತವ್ಯ ನಿರ್ವಹಿಸುವ ತಾಲ್ಲೂಕಿನ ಶಾಸಕರೊಂದಿಗೂ ಮಾತನಾಡಿ ಕಠಿಣ ಕ್ರಮಕ್ಕೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದಾರೆ. ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿ ಇರುವ ಅವರು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಲ್ಲೆಗೆ ಒಳಗಾದ ಬೇಲೇಕೇರಿಯ ಸರಸ್ವತಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದರು. ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು ಈ ರೀತಿಯ ಹಲ್ಲೆ ಆಘಾತಕಾರಿ. ಮೀನುಗಾರ ಹಾಗೂ ವ್ಯಾಪಾರಸ್ಥ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ. ಮಹಿಳೆಯರಿಗೆ ಅಧಿಕಾರಿಗಳೇ ಈ ರೀತಿ ತೊಂದರೆ ಕೊಟ್ಟರೆ ಅವರು ಸ್ವಾವಲಂಬಿಯ ಜೀವನ ನಡೆಸುವುದು ಕಷ್ಟಕರ. ಹಾಗಾಗಿ ನೊಂದವರ ಬೆಂಬಲಕ್ಕೆ ನಿಲ್ಲುತ್ತೇನೆ ಎನ್ನುವ ಮೂಲಕ ಕಾಳಜಿ ಮೆರೆದಿದ್ದಾರೆ. ಘಟನೆಯ ಕುರಿತು ದೂರು ರವಿವಾರ ಯಲ್ಲಾಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಚಿಕೇರಿಯ ಅಜಯ ಗಣೇಶ್ ಭಂಡಾರ್ಕರ್ ಎನ್ನುವ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ. ತರಕಾರಿ ವ್ಯಾಪಾರಿ ಸೀತಾ ಲಮಾಣಿ ದೂರು ದಾಖಲಿಸಿದ್ದಾರೆ. ರವಿವಾರ ಸಂಜೆ ತರಕಾರಿ ಮಾರುತ್ತಿರುವ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ಅಜಯ ಗಣೇಶ್ ಭಂಡಾರ್ಕರ್ ಪಕ್ಕದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಸರಸ್ವತಿ ಅಶೋಕ ಕುಡ್ತಾಳಕರ್ ಎಂಬುವರ ಮೀನಿನ ಬುಟ್ಟಿಯನ್ನು ನೆಲಕ್ಕೆ ಚೆಲ್ಲಿ ಅವರ ಮೇಲೆ ಹಲ್ಲೆ ಮಾಡುತ್ತಿದ್ದಾಗ, ರಕ್ಷಣಕ್ಕೆ ಹೋದ ಸಂದರ್ಭದಲ್ಲಿ ತನಗೂ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಸೀತಾ ದೂರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ತಿದ್ದುಪಡಿ ನಿಯಮದ ಅನ್ವಯ ಪ್ರಕರಣ ದಾಖಲಾಗಿದೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.