Flash News
Tuesday, September 22, 2026
Logo Flash News
Tuesday, September 22, 2026
Logo
ಮೀನುಗಾರ ಮಹಿಳೆಯ ಮೇಲೆ ಅಧಿಕಾರಿಯಿಂದ ಹಲ್ಲೆ; ದೂರು ಸಾಧ್ಯತೆ

ಮೀನುಗಾರ ಮಹಿಳೆಯ ಮೇಲೆ ಅಧಿಕಾರಿಯಿಂದ ಹಲ್ಲೆ; ದೂರು ಸಾಧ್ಯತೆ

September 21, 2026   |   Flash News

 

ಯಲ್ಲಾಪುರ: ತಾಲ್ಲೂಕಿನ ಮಂಚಿಕೇರಿಯಲ್ಲಿ ಮೀನು ಮಾರಾಟ ಮಾಡುತ್ತಿರುವ ಮಹಿಳೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬ ಏಕಾಏಕಿ ಹಲ್ಲೆ ಮಾಡಿದ್ದು ಹಲ್ಲೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. 

ಅಂಕೋಲಾ ತಾಲೂಕಿನಿಂದ ಪ್ರತಿನಿತ್ಯ ಮೀನುಗಾರ ಮಹಿಳೆ ದೂರದ ಯಲ್ಲಾಪುರಕ್ಕೆ ತೆರಳಿ ಶ್ರಮವಹಿಸಿ ಮೀನು ಮಾರಾಟ ಮಾಡುತ್ತಿದ್ದರು. ಸೋಮವಾರ ಮೀನು ಮಾರುವ ಮಹಿಳೆಯರ ಬಳಿ ಬಂದ ಅಧಿಕಾರಿ ಅಸಭ್ಯವಾಗಿ ವರ್ತಿಸಿ ಹಲ್ಲೆಗೆ ಮುಂದಾಗಿದ್ದು ಸಾರ್ವಜನಿಕರು ತಿಳಿ ಹೇಳಿದರೂ ಹಲ್ಲೆ ಮಾಡಿದ್ದು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ವಿಡಿಯೋ ಹಾಗೂ ಘಟನೆಯನ್ನು ಆಧರಿಸಿ ಅಧಿಕಾರಿಯ ಮೇಲೆ ದೂರು ದಾಖಲಾಗುವ ಸಾಧ್ಯತೆಗಳಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯನ್ನು ಮೀನುಗಾರ ಮುಖಂಡರು ಖಂಡಿಸಿದ್ದು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.