Flash News
Sunday, October 11, 2026
Logo Flash News
Sunday, October 11, 2026
Logo
ಮನೆಯಲ್ಲೇ ಮಿನಿ ಬಾರ್: ಆರೋಪಿ ಪರಾರಿ

ಮನೆಯಲ್ಲೇ ಮಿನಿ ಬಾರ್: ಆರೋಪಿ ಪರಾರಿ

October 10, 2026   |   Flash News

ಹೊನ್ನಾವರ: ಮನೆಯ ಸಿಮೆಂಟ್ ಶೆಡ್ ನಲ್ಲಿ ಪರವಾನಿಗೆ ಇಲ್ಲದೆ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು 20000ಕ್ಕೂ ಅಧಿಕ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿಗೆ ಹೆದರಿದ ಆರೋಪಿ ಪರಾರಿಯಾಗಿದ್ದಾನೆ. 

ತಾಲ್ಲೂಕಿನ ಅರೇಅಂಗಡಿಯ ನಾಗರಾಜ ವೆಂಕಟೇಶ ದೇವಲಾಪುರ, ಅರೇಅಂಗಡಿಯ ಸರ್ಕಲ್ ಬಳಿಯ ಚಂದಾವರ ಕಡೆಗೆ ಹಾಡಿದ ರಸ್ತೆಯ ಪಕ್ಕದಲ್ಲಿರುವ ನನ್ನ ಮನೆಯ ಸಿಮೆಂಟ್ ರೆಡ್ಡಿ ನಲ್ಲಿ ಅನಧಿಕೃತವಾಗಿ 7 ಕಾಕಿ ಬಣ್ಣದ ಬಾಕ್ಸ್ ಗಳಲ್ಲಿ ಹಾಗೂ ನೆಲದ ಮೇಲೆ ಅಂದಾಜು 20915 ರೂಪಾಯಿ ಮೌಲ್ಯದ 22 ಪ್ರಕಾರದ ವಿವಿಧ ಮದ್ಯವನ್ನು ಸಂಗ್ರಹಿಸಿಕೊಂಡಿದ್ದು ಮಾರಾಟ ಮಾಡುತ್ತಿರುವ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇತ್ತೀಚಿಗೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಮದ್ಯ ಮಾರಾಟದ ಪ್ರಮಾಣ ಹೆಚ್ಚಾಗಿದ್ದು ಅಬಕಾರಿ ಇಲಾಖೆಯ ನಿಷ್ಕ್ರಿಯತೆ ಮುಂದುವರೆದಿದೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.