ಕಾರವಾರ : ತಾಲ್ಲೂಕಿನ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಗೋವಾ ಸಾರಾಯಿಯನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶನಿವಾರ ಮುಂಜಾನೆ 6.30 ಗಂಟೆಯ ಸುಮಾರಿಗೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ. ಒಂದು ಗಂಟೆಯ ನಂತರ ಅರಣ್ಯ ಪ್ರದೇಶಕ್ಕೆ ಹೋಗಿ ಪರಿಶೀಲಿಸಿದಾಗ ಆರೋಪಿತ ಹೋಟೆಗಾಳಿಯ ಸಮೀರ ಸಂಜಯ್ ಮಾಲ್ಸೇಕರ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ಮಾದರಿಯ 363 ಮದ್ಯ ಬಾಟಲಿಗಳಳನ್ನು( 63,480 ರೂಪಾಯಿ ಮೌಲ್ಯದ) ಗೋವಾ ರಾಜ್ಯದ ಗಡಿಯಿಂದ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಚೀಲಗಳನ್ನು ತಲೆ ಮೇಲೆ ಹೊತ್ತುಕೊಂಡು ತಂದು ಕಾಲ್ನಡಿಗೆಯಲ್ಲಿ ಬಂದು ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿದ್ದ ಎನ್ನಲಾಗಿದ್ದು ಆ ವೇಳೆ ಪೊಲೀಸರು ದಾಳಿ ನಡೆಸಿ ಮದ್ಯ ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.