Flash News
Monday, November 23, 2026
Logo Flash News
Monday, November 23, 2026
Logo
ತೆರೆದ ಬಾವಿಯಲ್ಲಿ ಜೀವ ತೊರೆದ ಕಡವೆಗಳು!

ತೆರೆದ ಬಾವಿಯಲ್ಲಿ ಜೀವ ತೊರೆದ ಕಡವೆಗಳು!

November 23, 2026   |   Flash News

ಕಾರವಾರ: ನಗರದ ಬೈತ್‌ಖೋಲ್ ವ್ಯಾಪ್ತಿಯ ಅಲಿಗದ್ದಾದಲ್ಲಿ ತೆರೆದ ಬಾವಿಗೆ ಬಿದ್ದು ಎರಡು ಗಂಡು ಕಡವೆಗಳು ಮೃತಪಟ್ಟಿವೆ. ಹಲವು ವರ್ಷಗಳಿಂದ ಅಪಾಯಕಾರಿಯಾಗಿ ತೆರೆದಿರುವ ಇದೇ ಬಾವಿಗೆ ಈ ಹಿಂದೆಯೂ ಜಾನುವಾರು, ಕಾಡುಪ್ರಾಣಿಗಳು ಹಾಗೂ ಮಹಿಳೆಯೊಬ್ಬರು ಬಲಿಯಾಗಿದ್ದರೂ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಆಹಾರ ಅರಸಿ ಬಂದಿದ್ದ ಕಡವೆಗಳು ಬಾವಿಯ ಸುತ್ತಲಿನ ಕೆಸರು ಪ್ರದೇಶದಲ್ಲಿ ಕಾಲು ಜಾರಿ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಾವಿಯಿಂದ ಮೇಲಕ್ಕೆ ಬರಲಾಗದೆ ಎರಡೂ ಪ್ರಾಣಿಗಳು ಮೃತಪಟ್ಟಿವೆ. ಘಟನೆ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲಿಗದ್ದಾದಲ್ಲಿರುವ ಈ ತೆರೆದ ಬಾವಿ ಹಲವು ವರ್ಷಗಳಿಂದ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಈ ಹಿಂದೆಯೂ ಬಾವಿಗೆ ಬಿದ್ದ ಜಾನುವಾರುಗಳು ಮತ್ತು ಕಾಡುಪ್ರಾಣಿಗಳು ಸಾವನ್ನಪ್ಪಿದ್ದವು. ಮಹಿಳೆಯೊಬ್ಬರೂ ಇದೇ ಬಾವಿಗೆ ಬಿದ್ದು ಮೃತಪಟ್ಟಿದ್ದರು ಎನ್ನಲಾಗಿದೆ. ಇಷ್ಟೆಲ್ಲ ಘಟನೆಗಳು ನಡೆದಿದ್ದರೂ ಬಾವಿಯ ಸುತ್ತ ತಡೆಗೋಡೆ ಅಥವಾ ಸುರಕ್ಷತಾ ಬೇಲಿ ನಿರ್ಮಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದಲ್ಲದೆ, ಬಾವಿಯ ನೀರು ಕೂಡ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲದ ಸ್ಥಿತಿಯಲ್ಲಿದೆ. ಮನುಷ್ಯರು ಮತ್ತು ಮೂಕಪ್ರಾಣಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಬಾವಿಗೆ ಕನಿಷ್ಠ ತಂತಿ ಬೇಲಿಯನ್ನಾದರೂ ಅಳವಡಿಸಿದ್ದರೆ ಇಂದಿನ ದುರಂತ ತಪ್ಪಿಸಬಹುದಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ. ಪ್ರಾಣಹಾನಿ ಸಂಭವಿಸಿದಾಗ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಲ್ಲ, ಇಂತಹ ಅಪಾಯಕಾರಿ ಬಾವಿಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಬಾವಿಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

 

 

 

 

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.