Flash News
Thursday, December 11, 2025
Logo Flash News
Thursday, December 11, 2025
Logo
ಖ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ: ಆರೋಪಿತರಿಗೆ ಪ್ರಭಾವಿಗಳ ರಕ್ಷಣೆ - ಪ್ರಮೋದ್ ಮುತಾಲಿಕ್

ಖ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ: ಆರೋಪಿತರಿಗೆ ಪ್ರಭಾವಿಗಳ ರಕ್ಷಣೆ - ಪ್ರಮೋದ್ ಮುತಾಲಿಕ್

October 30, 2025   |   Flash News

 

ಶಿರಸಿ: ಖ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗದೆ ಪ್ರಭಾವಿಗಳು ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದೇವೆ.

ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಮದುವೆ ಆಗದೇ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಕಲ್ಯಾಣ ಮಂಟಪದವರು ಇಲ್ಲಿ ಮದುವೆ ಆಗಿಲ್ಲ ಅನ್ನೋ ಲೆಟರ್ ಕೊಟ್ಟಿದ್ದಾರೆ ಆದರೆ ಕ್ರಮವಾಗುತ್ತಿಲ್ಲ. ಕೊಳಗೇರಿ ಮನೆಯನ್ನು ಹೇಗೆ ಬಾಡಿಗೆ ಕೊಡುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ. 

ಮದುವೆ ಸಂದರ್ಭದಲ್ಲಿ ನೀಡಿದ ಅಫಿಡಾವಿಟ್ ಸಂಪೂರ್ಣ ಬೋಗಸ್ ಆಗಿದೆ. ಪೊಲೀಸ್ ಇಲಾಖೆ ಕಣ್ಮುಚ್ಚಿ ಸುಮ್ಮನೆ ಕುಳಿತಿದೆ. ಸಚಿವ ಜಮೀರ್ ಅಹ್ಮದ್ ರಿಂದ ಇಲ್ಲಿನ ಡಿಸಿ ಎಸ್ಪಿ ಮೇಲೆ ಒತ್ತಡವಿದೆ. ಜಮೀರ್ ಕೃಪಾಪೋಷಿತ ಆಶ್ರಯದಲ್ಲಿ ಆರೋಪಿ ರಕ್ಷಣೆ ಪಡೆದಿದ್ದಾನೆ. ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವಿದೆ. ಆದ್ದರಿಂದ ಈ ಕೂಡಲೇ ಕ್ರಮ ಕೈಗೊಳ್ಬೇಕು ಎಂದು ಅವರು ಆಗ್ರಹಿಸಿದ್ದಾರೆ

 

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2025 ಜನಮಾಧ್ಯಮ.. All Rights Reserved.