ಶಿರಸಿ: ದಾಂಡೇಲಿ ಅರಣ್ಯ ಇಲಾಖೆಯ ಎಸಿಎಫ್ ಮದನ್ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಸಂಚಾರಿ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ಮೂರನೇ ಆರೋಪಿ ಪ್ರಶಾಂತ್ ರಾಮು ಲಂಬಾಣಿಗೆ 10 ವರ್ಷ ಕಾರಾಗೃಹ ವಾಸ 11 ಸಾವಿರ ದಂಡ 50 ಸಾವಿರ ಮೃತರ ಅವಲಂಬಿತರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ. ಉಳಿದ ಆರೋಪಿಗಳಿಗೆ ಒಂದುಸಾವಿರ ದಂಡ ವಿಧಿಸಿದ್ದು 1 ರಿಂದ 4,6,8,10 ನೇ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಒಟ್ಟು 12 ಜನ ಆರೋಪಿಗಳಲ್ಲಿ ಎಂಟು ಜನರಿಗೆ ಶಿಕ್ಷೆ ಪ್ರಕಟಗೊಂಡಿದೆ. 2012 ಮೇ 6 ರಂದು ದಾಂಡೇಲಿ ಮೊಸಳೆ ಪಾರ್ಕ ನಲ್ಲಿ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಮೊಸಳೆಗೆ ಮಾಂಸ ಹಾಕದಂತೆ ಮದನ್ ನಾಯಕ ತಿಳಿ ಹೇಳಿದ್ದರು. ಅದಕ್ಕೆ ಅವರ ಮೇಲೆ ಪ್ರವಾಸಿಗ ಮಹಿಳೆಯರೂ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಗೆ ಗಂಭೀರ ಗಾಯವಾಗಿ ಮೇ 8 ರಂದು ಎಸಿಎಫ್ ಮದನ್ ನಾಯಕ ಮೃತ ಪಟ್ಟಿದ್ದರು. ಪ್ರಕರಣವನ್ನು ಅಂದಿನ ಸರ್ಕಾರ ಸಿಐಡಿಗೆ ವಹಿಸಿತ್ತು. ಮದನ್ ನಾಯಕ ಪತ್ನಿ ಸುಮತಿ ದೂರು ಹಿನ್ನೆಲೆಯಲ್ಲಿ ತನಿಖೆ ನಡೆದು ಶಿಕ್ಷೆ ಪ್ರಕಟವಾಗಿದೆ. ಶಿರಸಿಯ ಜಿಲ್ಲಾ ಸತ್ರ ನ್ಯಾಯಾಲಯದ ಕಿರಣ್ ಕಿಣಿ ನ್ಯಾಯಾಧೀಶರಿಂದ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ರಾಜೇಶ್ ಮಳಗೀಕರ್ ವಾದ ಮಂಡಿಸಿದ್ದರು.