ಕಾರವಾರ: ಪ್ರೀತಿ ನಿರಾಕರಿಸಿದ ಕಾರಣದಿಂದ ಯುವಕನ ಋಣಾತ್ಮಕ ಮಾತುಗಳಿಂದ ದುಸ್ಪ್ರೇರಣೆಗೊಂಡು ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾರವಾರದ ಕದ್ರಾ ಕೆಪಿಸಿ ಕಾಲೋನಿಯ ರಿಶೆಲ್ ಡಿಸೋಜಾ (20) ಆತ್ಮಹತ್ಯೆ ಮಾಡಿಕೊಂಡವರು. ವಿದ್ಯಾರ್ಥಿನಿ ಆಗಿರುವ ರಿಶೆಲ್ ಗೆ ಇಲ್ಲಿನ ನಂದನಗದ್ದಾದ ಚಿರಾಗ್ ಚಂದ್ರಹಾಸ ಕೊಠಾರಕರ ಪರಿಚಯವಾಗಿದ್ದ. ಫೋನ್ ನಲ್ಲಿ ಮಾತಾಡುವುದು, ಆಗಾಗ ಹುಡುಗಿಯ ಮನೆಯ ಕಡೆ ಸುತ್ತಾಡುವುದು ಮಾಡುತ್ತಿದ್ದ. ರಿಶೆಲ್ ರನ್ನು ಪ್ರೀತಿಸುವುದಾಗಿ ಹೇಳಿ ಕಾಡಿಸುತ್ತಿದ್ದ. ಇದನ್ನು ನಿರಾಕರಿಸದಕ್ಕೆ ಚಿರಾಗ್, ಯುವತಿಗೆ ನೀನು ಬದುಕಿದ್ದು ಪ್ರಯೋಜನವಿಲ್ಲ. ಹೇಗಾದರೂ ಸತ್ತುಹೋಗು ಎಂಬ ಋಣಾತ್ಮಕ ಮಾತುಗಳನ್ನು ಹೇಳುತ್ತಿದ್ದ. ಇದರಿಂದ ದುಸ್ಪ್ರೇರಣೆಗೊಂಡು ಮನೆಯ ಬೆಡ್ ರೂಮಿನ ಫ್ಯಾನಿಗೆ ಸೀರೆಯ ಸಹಾಯದಿಂದ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಯುವತಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಪಾದಿತ ಯುವಕ ರಾಜಕಾರಣಿಯ ಮಗ ಎನ್ನಲಾಗಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ