ಕಾರವಾರ: ಸ್ಥಳೀಯ ಕಟ್ಟಡ ನಿರ್ಮಾಣ ಮಾಲೀಕರಿಗೆ ಉಸುಕಿನ ಕೊರತೆಯಾಗಿದ್ದು ಉಸುಕಿನ ಅಳತೆಯಲ್ಲೂ ಮೋಸವಾಗುತ್ತಿದೆ. ಈ ನಡುವೆ ಹೆಚ್ಚಿನ ಹಣದ ಆಸೆಗೆ ಗೋವಾ ಹುಬ್ಬಳ್ಳಿಗೆ ಮರಳು ಸಾಗಾಟ ಮಾಡುವ ಜಾಲವು ಸಕ್ರಿಯವಾಗಿದ್ದು ಆಡಳಿತ ಮಾತ್ರ ಸುಮ್ಮನಿದೆ ಎನ್ನುವ ಆರೋಪ ಕೇಳಿಬಂದಿದೆ.
ಕಾರವಾರದ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ದಂಧೆ ನಡೆಯುತ್ತಿದೆ. ಬಡವರು ಹೊಟ್ಟೆಪಾಡಿಗಾಗಿ ಹಾಗೂ ಸ್ಥಳೀಯ ಕಟ್ಟಡಕ್ಕಾಗಿ ಅಕ್ರಮ ಮರಳು ದಂಧೆ ಮಾಡುತ್ತಾರೆಂದು ಹೇಳುವ ಅಧಿಕಾರಿಗಳು ಗೋವಾ ಹುಬ್ಬಳ್ಳಿ ಸಾಗಾಟು ಮಾಡುವಾಗ ಸುಮ್ಮನಿರುವ ಜರೂರತ್ತು ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ರಾಜಕೀಯ ಒತ್ತಡಕ್ಕೆ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಯಿತೇ ಜಿಲ್ಲಾಡಳಿತ? ಎನ್ನುವ ಸಂಶಯ ಮೂಡಿದೆ. ಸ್ಥಳೀಯರಿಗೆ ಕನಿಷ್ಠ ದರದೊಂದಿಗೆ ಸರಿಯಾದ ಅಳತೆಯ ಉಸುಕು ದೊರಕಿಸಿ ಕೊಡುವಂತೆ ಸಹ ಸಾರ್ವಜನಿಕರ ಆಗ್ರಹವಿದೆ. ಅಕ್ರಮ ದಂದೆಯ ಕುರಿತು ಹಲವಾರು ಬಾರಿ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.