Flash News
Sunday, June 07, 2026
Logo Flash News
Sunday, June 07, 2026
Logo
ನ್ಯಾಯಕ್ಕಾಗಿ ಪಟ್ಟು ಬಿಡದ ನ್ಯಾಯವಾದಿ 6ನೇ ದಿನಕ್ಕೆ ಇನ್ನಷ್ಟು ಬಿಗುವಾದ ನಾಗರಾಜ ನಾಯಕರ ಧರಣಿ

ನ್ಯಾಯಕ್ಕಾಗಿ ಪಟ್ಟು ಬಿಡದ ನ್ಯಾಯವಾದಿ 6ನೇ ದಿನಕ್ಕೆ ಇನ್ನಷ್ಟು ಬಿಗುವಾದ ನಾಗರಾಜ ನಾಯಕರ ಧರಣಿ

May 12, 2026   |   Flash News

ಅಂಕೋಲಾ: ಗೃಹ ಸಚಿವರ ಭೇಟಿ ಮತ್ತು ಆಪ್ತ ಗೋಪಾಲಕೃಷ್ಣ ನಾಯಕ ಆಟೋಟಾಪಗಳಿಗೆ ಕಡಿವಾಣ ಹಾಕುವ ಬೇಡಿಕೆಯಿಟ್ಟು ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಆರನೇ ದಿನಕ್ಕೆ ತಲುಪಿದ್ದು ನ್ಯಾಯಕ್ಕಾಗಿ ಪಟ್ಟು ಬಿಡದೆ ನಾಗರಾಜ ನಾಯಕ ಧರಣಿ ಮುಂದುವರಿಸಿದ್ದಾರೆ. ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆವರಣ ಗೋಡೆಯ ಪಕ್ಕದಲ್ಲಿ ಮೇ 6ರಿಂದ ನಾಗರಾಜ ನಾಯಕ ಧರಣಿ ಆರಂಭಿಸಿದ್ದರು. ಅನುಮತಿ ಪತ್ರ ಕೋರಿ ತಹಶೀಲ್ದಾರರಿಗೆ ಮೇ 7ರಂದು ಲಿಖಿತ ಮನವಿ ಸಲ್ಲಿಸಿದ್ದು ತಹಶೀಲ್ದಾರರು ಹಿಂಬರಹ ನೀಡದೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಇರುವ ಕಾರಣ ಹಾಗೂ ತಹಶೀಲ್ದಾರ್ ಆದಿಯಾಗಿ ವಿವಿಧ ಇಲಾಖೆ ಅಧಿಕಾರಿಗಳು, ಪೋಲಿಸ್ ಇಲಾಖೆಯ ಹಿರಿಯಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಾಗರಾಜ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ನಾಲ್ಕು ದಿನಗಳ ಕಳೆದರೂ ಪರವಾನಿಗೆ ನೀಡುವ ಕುರಿತು ಇಲ್ಲವೇ ಅನುಮತಿ ರದ್ದಾದ ಕುರಿತು ತಹಶೀಲ್ದಾರರಿಂದ ಬಾರದ ಹಿನ್ನೆಲೆ ಡಿಮ್ಡ್ ಪರ್ಮಿಷನ್ ಎಂದು ಪರಿಗಣಿಸಿ ಧರಣಿ ಮುಂದುವರೆದಿತ್ತು. ಗೃಹ ಸಚಿವರ ಆಗಮನ ಮತ್ತು ವಿವಿಧ ಬೇಡಿಕೆಗಳನ್ನು ಇಟ್ಟು ನಾಗರಾಜ ನಾಯಕರು ನಡೆಸುತ್ತಿರುವ ಧರಣಿಗೆ ಸಂಸದರು ಶಾಸಕರು ವಕೀಲರು ವಿವಿಧ ಸಂಘಟನೆಗಳ ಮುಖ್ಯಸ್ಥರು ರಾಜ್ಯದ ಮೂಲೆ ಮೂಲೆಗಳಿಂದ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದರು. ಹೋರಾಟದ ತೀವ್ರತೆ ಪರಿಣಾಮ ಹೋರಾಟವನ್ನು ಹತ್ತಿಕ್ಕಲು ಆಡಳಿತ ಯಂತ್ರವನ್ನು ಉಪಯೋಗಿಸಿ ಒತ್ತಡ ಸೃಷ್ಟಿಸಿ ಮೇ 11ರಂದು ಸಂಜೆ ಪಿಎಸ್ಐ ಗುರುರಾಜ್ ಹಾದಿಮನಿ, ಸಿಪಿಐ ಚಂದ್ರಶೇಖರ ಮಠಪತಿ ಅನುಮತಿ ರದ್ದಾಗಿದ್ದು ಅನುಮತಿ ಪಡೆದು ಪ್ರತಿಭಟನೆ ನಡೆಸುವಂತೆ ತಿಳಿಸಿದ್ದು, ಸಮರ್ಪಕ ಉತ್ತರ ನೀಡುವಲ್ಲಿ ತಹಶೀಲ್ದಾರರು ಮತ್ತು ಪೊಲೀಸ್ ಇಲಾಖೆ ವಿಫಲವಾಗಿದ್ದು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಒತ್ತಡ ಸೃಷ್ಟಿಸಿ ಪ್ರತಿಭಟನೆ ಹತ್ತಿಕ್ಕಲು ಮುಂದಾಗುತ್ತಿರುವುದಕ್ಕೆ ಸ್ಪಷ್ಟ ಪುರಾವೆ ದೊರೆತಂತಿತ್ತು. ಕಂದಾಯ ಪೊಲೀಸ್ ಮತ್ತು ಪುರಸಭೆ ಒತ್ತಡದಿಂದ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾಗಿರುವ ಕುರಿತು ತಾಲೂಕಿನಲ್ಲಿ ಸಂತಾಪ ವ್ಯಕ್ತವಾಗುತ್ತಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು ಪ್ರತಿಭಟನೆ ಮುಂದುವರೆಸುತ್ತೇನೆ ಎನ್ನುವ ಧ್ಯೇಯದೊಂದಿಗೆ ಪಟ್ಟಣದ ಜೈಹಿಂದ್ ಮೈದಾನದಲ್ಲಿ ಅನುಮತಿ ಪಡೆದು ಪ್ರತಿಭಟನೆಯನ್ನು ನಾಗರಾಜ ನಾಯಕ ಮುಂದುವರಿಸಿದ್ದಾರೆ. “ ಈಗಾಗಲೇ ಪ್ರತಿಭಟನೆಯ ತೀವ್ರತೆ ಸರ್ಕಾರಕ್ಕೆ ತಲುಪಿದೆ. ಗೃಹ ಸಚಿವರ ಆಪ್ತ ಎಂದು ಹೇಳಿಕೊಳ್ಳುವ ಗೋಪಾಲಕೃಷ್ಣ ನಾಯಕ ಪ್ರತಿಭಟನೆಯನ್ನು ಹತ್ತಿಕ್ಕಲು ನಾನಾಕಸರತ್ತು ನಡೆಸುತ್ತಿರುವುದು ನೋಡಿದರೆ ಪ್ರತಿಭಟನೆಯ ಪರಿಣಾಮವನ್ನು ಅವರೇ ಅರಿತಂತಿದೆ. ಆಣೆ ಪ್ರಮಾಣ ಮಾಡಿ ತಪ್ಪೇ ಮಾಡಿಲ್ಲ ಎಂದರೆ ಪ್ರತಿಭಟನೆ ಇನ್ನು ಹತ್ತಿಕ್ಕಲು ಪ್ರಯತ್ನಿಸುವುದು ಯಾವ ಭಯಕ್ಕಾಗಿ.” - ನಾಗರಾಜ ನಾಯಕ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.