Flash News
Sunday, June 07, 2026
Logo Flash News
Sunday, June 07, 2026
Logo
ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಿ; ನಾಗರಾಜ ನಾಯಕರಿಗೆ ರಕ್ಷಣೆ ನೀಡಿ- ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ರವಿಕುಮಾರ

ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಿ; ನಾಗರಾಜ ನಾಯಕರಿಗೆ ರಕ್ಷಣೆ ನೀಡಿ- ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ರವಿಕುಮಾರ

May 13, 2026   |   Flash News

ಅಂಕೋಲಾ: ನ್ಯಾಯಕ್ಕಾಗಿ ಒಂದು ವಾರದಿಂದ ವಕೀಲ ನಾಗರಾಜ ನಾಯಕ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು ವಿಧಾನ ಪರಿಷತ್ ಸದಸ್ಯ ಮತ್ತು ಮುಖ್ಯ ಸಚೇತಕ ರವಿಕುಮಾರ ಬಿಜೆಪಿ ವತಿಯಿಂದ ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ವಕೀಲ ನಾಗರಾಜ ನಾಯಕರಿಗೆ ರಕ್ಷಣೆ  ನೀಡಬೇಕೆಂದು ಆಗ್ರಹಿಸಿದ್ದಾರೆ.ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಕೀಲ ನಾಗರಾಜ ನಾಯಕ ಅವರ ಮೇಲೆ ದೌರ್ಜನ್ಯ ಎಸಗಲು ಕಾರಣವಾದವರ ವಿರುದ್ಧ ಸೂಕ್ತ ತನಿಖೆಯಾಗಬೇಕು. ಗೋಪಾಲಕೃಷ್ಣ ನಾಯಕ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನಾಗರಾಜ ನಾಯಕರಿಗೆ ರಕ್ಷಣೆ ನೀಡಬೇಕು ಇದು ಬಿಜೆಪಿ ಆಗ್ರಹವಾಗಿದೆ. ಅವರು ಒಂದು ವಾರದಿಂದ ಧರಣಿ ನಿರತರಾಗಿದ್ದಾರೆ ಎಂದರು. ಪಕ್ಷಾತೀತವಾಗಿ ನಡೆಯುತ್ತಿದ್ದ ನಾಗರಾಜ ನಾಯಕರ ಹೋರಾಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದು, ಸಂಸದರು, ಶಾಸಕರು ಧರಣೀ ಸ್ಥಳಕ್ಕೆ ಆಗಮಿಸಿದ್ದರು. ಇದೀಗ ರಾಜ್ಯ ಬಿಜೆಪಿ ವತಿಯಿಂದ ಬೆಂಬಲ ವ್ಯಕ್ತಪಡಿಸಿದ್ದು ಹೋರಾಟದ ತಿರುವ ಬದಲಾಗುವ ಸಾಧ್ಯತೆಗಳಿವೆ.

Recent Flash News
Logo

ಜನಮಾಧ್ಯಮ ಕನ್ನಡದ ನಿಖರ ಸುದ್ದಿ ಮತ್ತು ತಾಜಾ ಮಾಹಿತಿಯ ವಿಶ್ವಾಸಾರ್ಹ ವೇದಿಕೆ. ಇಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳೊಂದಿಗೆ ಆರ್ಥಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಶ್ಲೇಷಿತ ಸುದ್ದಿಗಳನ್ನು ಪಡೆಯಬಹುದು. ಜನರಿಗಾಗಿ ಜನರಿಂದ ನಿರ್ಮಿತವಾದ ಈ ಮಾಧ್ಯಮವು ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿ ನೀಡುವುದರಲ್ಲಿ ತನ್ನ ವಿಶೇಷತೆ ಹೊಂದಿದೆ. ಕನ್ನಡ ಸುದ್ದಿಯನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಮತ್ತು ನವೀಕರಿಸಲ್ಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಜನಮಾಧ್ಯಮ ನಿಮ್ಮ ನಂಬಲರ್ಹ ಮೂಲ.

Tags

National Crime State Flash News Ankola

© 2026 ಜನಮಾಧ್ಯಮ.. All Rights Reserved.