ಅಂಕೋಲಾ: ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು ಬಳಿಕ ಕಾರಿನ ಸಮೇತ ಸ್ಫೋಟಿಸಿಕೊಂಡಿರುವ ಘಟನೆ ತುಮಕೂರು ಬಳಿ ನಡೆದಿದೆ. ಕಾರು ಬೆಂಗಳೂರಿನಿಂದ ಅಂಕೋಲಾ ಕಡೆಗೆ ಹೊರಟಿತ್ತು ಎನ್ನಲಾಗಿದೆ. ಯುವಕನೊಬ್ಬ ಕಾರಿನೊಖಗೆ ಕುಳಿತು ತನ್ನನ್ನು ತಾನೇ ಸ್ಫೋಟಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದ ಕಳ್ಳಂಬೆಳ್ಳ ಬಳಿ ನಡೆದಿದೆ. ನಾಗೇಂದ್ರ(ಅಂದಾಜು 30ವರ್ಷ) ಮೃತ ಯುವಕ. ನಾಗೇಂದ್ರ ಬೆಂಗಳೂರಿನಿಂದ ಕಾರಿನಲ್ಲಿ ಯುವತಿಯನ್ನು ಕರೆದೊಯ್ದಿದ್ದ, ಮಾರ್ಗ ಮಧ್ಯೆ ನಾಗೇಂದ್ರ ಹಾಗೂ ಯುವತಿ ನಡುವೆ ಜಗಳವಾಗಿತ್ತು. ಜಗಳದ ನಡುವೆ ಯುವತಿಗೆ ನಾಗೇಂದ್ರ ಚಾಕುವಿನಿಂದ ಇರಿದಿದ್ದಾನೆ. ಹಲ್ಲೆಗೊಳಗಾದ ಯುವತಿ ತಕ್ಷಣ ಕಾರಿನ ಡೋರ್ ತೆಗೆದು ಹೊರಗಿಳಿದಿದ್ದಾಳೆ. ಯುವತಿ ಅಂಕೋಲಾ ಮೂಲದ ಅಗಸೂರಿನವರು ಎನ್ನಲಾಗಿದೆ ಯುವತಿ ಕಾರಿನಿಂದ ಇಳಿದಾಗ ಕಾರು ಚಾಲಕ ಸಹಾಯಕ್ಕೆ ತೆರಳಿದ್ದ. ಚಾಲಕ ಕಾರಿನಿಂದ ಇಳಿಯುತ್ತಿದ್ದಂತೆ ಕಾರಿನ ಡೋರ್ ಲಾಕ್ ಮಾಡಿಕೊಂಡ ನಾಗೇಂದ್ರ ಏಕಾಏಕಿ ಕಾರನ್ನು ಸೊಹೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಡಬಾಂಬ್ ಬಳಸಿ ಕಾರು ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮತ್ತೊಂದು ಜೀವಂತ ಬಾಂಬ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ