ಕಾರವಾರ: ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಎರಡನೇ ಬಾರಿಗೆ ಆಯ್ಕೆಯಾಗಿದ್ದು ಅವರ ಪುನರ್ ಆಯ್ಕೆಗೆ ಜಿಲ್ಲಾ ಕುಸ್ತಿ ಸಂಘ ಹರ್ಷ ವ್ಯಕ್ತಪಡಿಸಿದೆ.
ಗುಣರಂಜನ್ ಶೆಟ್ಟಿ ಅವರೊಂದಿಗೆ ಹಿರಿಯ ಉಪಾಧ್ಯಕ್ಷರಾಗಿ, ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಜೆ ಹಾಗೂ ಖಜಾಂಚಿಯಾಗಿ ಶ್ರೀನಿವಾಸ ಅಂಗಾರಕೋಡಿ ಆಯ್ಕೆಯಾಗಿದ್ದಾರೆ. 2026ರಿಂದ 2030ರವರೆಗೆ ಇವರ ಅಧಿಕಾರಾವಧಿ ಇರಲಿದೆ. ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ರಾಷ್ಟ್ರೀಯ ಬೀಚ್ ಕುಸ್ತಿ ಸಂಘದ ಅಧ್ಯಕ್ಷರು ಆಗಿರುವ ಗುಣರಂಜನ್ ಶೆಟ್ಟಿ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕುಸ್ತಿ ಕ್ರೀಡೆಯನ್ನು ಇನ್ನಷ್ಟು ಸಂಘಟಿತವಾಗಿ ಬೆಳೆಯಲಿ. ಗ್ರಾಮೀಣ ಮತ್ತು ಜಿಲ್ಲಾ ಮಟ್ಟದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಹೆಚ್ಚಿನ ತರಬೇತಿ ಮತ್ತು ಸ್ಪರ್ಧೆಯ ಅವಕಾಶ ದೊರೆಯುವಂತಾಗಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರು ಬೆಳಗಲಿ ಎಂದು ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್, ಉಪಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಕುಸ್ತಿ ಸಂಘದ ಗ್ರಾಮೀಣ ಘಟಕದ ಸುಭಾಸ್ ಗುನಗಿ, ಉಪಾಧ್ಯಕ್ಷ ಪ್ರವೀಣ ತಾಂಡೆಲ್ ಹಾಗೂ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ