ಕುಮಟಾ: ಉದ್ಯಮ ಮತ್ತು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಯಶೋಧರ ನಾಯ್ಕ(69) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೂಲತ ಹೊನ್ನಾವರ ತಾಲೂಕಿನ ಯಶೋಧರ ನಾಯ್ಕ ಮೈಸೂರು ಜಿಲ್ಲೆಯನ್ನು ಕೇಂದ್ರ ಸ್ಥಾನವಾಗಿಸಿ ಸಾರಿಗೆ ಹಣಕಾಸು ಮತ್ತಿತರ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳ ರಾಜಕೀಯ ಒಡನಾಟದೊಂದಿಗೆ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದ್ದು ಯಶೋಧರ ನಾಯ್ಕ ಟ್ರಸ್ಟ್ ಮೂಲಕ ನೂರಾರು ನೊಂದ ಜನರಿಗೆ ಸೇವೆ ನೀಡಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದು ಪ್ರಮುಖ ರಾಜಕೀಯ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದರು. ಮೈಸೂರು ರಾಜಮನೆತನದ ಹಾಗೂ ಚಿತ್ರರಂಗದ ನಂಟು ಹೊಂದಿದ್ದರು. ಅನಾರೋಗ್ಯದ ಕಾರಣ ಚಿಕಿತ್ಸೆಗೆ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ ಇದ್ದಾರೆ. ಯಶೋಧರ ನಾಯ್ಕ ಅಗಲುವಿಕೆಗೆ ವಿವಿಧ ಕ್ಷೇತ್ರದ ಮುಖಂಡರು ಸಂತಾಪ ಸೂಚಿಸಿದ್ದಾರೆ.