ಅಂಕೋಲಾ: ಬಳಲೆಯಿಂದ ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೋರ್ವರು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.
ತಾಲ್ಲೂಕಿನ ಮಾದನಗೇರಿ ಬಳಲೆಯ ಗುರುನಾಥ ನಾಗೇಶ ಗುನಗಾ (35) ನಾಪತ್ತೆಯಾದವರು. ಗುರುನಾಥ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಚಿಕ್ಕಪ್ಪನ ಮಗಳ ಮದುವೆಯ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 16.04.2025ರಂದು ಬೆಂಗಳೂರಿಗೆ ಹೋಗುವುದಾಗಿ ಮನೆಯಿಂದ ಹೊರಟವರು ಈವರೆಗೂ ಮನೆಗೆ ಬಾರದೆ ಸಂಪರ್ಕಕ್ಕೂ ಸಿಗದೆ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಕಾಣೆಯಾಗಿದ್ದು ತನ್ನ ತಮ್ಮನನ್ನು ಹುಡುಕಿ ಕೊಡುವಂತೆ ಸಹೋದರ ರಾಮಕೃಷ್ಣ ಗುನಗಾ ದೂರು ಸಲ್ಲಿಸಿದ್ದಾರೆ.
ಪ್ರತ್ಯೇಕವಾಗಿ, ರಾತ್ರಿ ಎಂಟರ ವೇಳೆಗೆ ಮನೆಯಿಂದ ಹೊರೆಗೆ ಹೋಗಿ ಬರುವುದಾಗಿ ತಿಳಿಸಿದ ಯುವತಿಯೋರ್ವಳು ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನ ಅಗ್ರಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲಕೇರಿ ಗ್ರಾಮದ ಚಂದ್ರಕಲಾ ನೀಲಕಂಠ ಗೌಡ (20)ನಾಪತ್ತೆಯಾದವರು. ಚಂದ್ರಕಲಾ ದಿನಾಂಕ 1.9.2025ರಂದು ರಾತ್ರಿಯ ವೇಳೆ ಹೊರಗೆ ಹೋಗಿದ್ದು ಇದುವರೆಗೆ ಮನೆಗೆ ಬಾರದೆ ಯಾರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದು ಹುಡುಕಿಕೊಡುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.
ಕಾಣೆಯಾದವರ ವಿವರ ತಿಳಿದುಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆಯ 08388- 220333 ಸಂಖ್ಯೆಯ ದೂರವಾಣಿಗೆ ತಿಳಿಸಲು ಪೊಲೀಸರು ಕೋರಿದ್ದಾರೆ.