ಅಂಕೋಲಾ: ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹಟ್ಟಿಕೇರಿಯ ಬಳಿ ನಡೆದಿದೆ.
ಹಿರಿಯ ರಾಜೀವ ಶ್ರೀಪಾದ ಪಿಕೆಳೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಫಾರ್ಮಾಸಿಸ್ಟ್ ಆಗಿರುವ ಅವರು ಮನೆಯಲ್ಲಿ ಯಾರು ಇಲ್ಲದಿರುವ ವೇಳೆ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಾರವಾರ ಪ್ರತಿಷ್ಠಿತ ವೈದ್ಯಕೀಯ ಕುಟುಂಬದ ರಾಜೀವ್
ಡಬಲ್ ಬೆರಲ್ ಗನ್ ಮೂಲಕ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಇಬ್ಬರು ಗಂಡು ಮಕ್ಕಳು ವೈದ್ಯರು, ಹೆಂಡತಿ ಯೊಂದಿಗೆ ಸುಖ ಜೀವನಸಾಗಿಸುತಿದ್ದ ರಾಜೀವ ಆತ್ಮಹತ್ಯೆ ಮಾಡಿಕೊಂಡಿದ್ದೆಕೆ? ಎನ್ನುವ ಪ್ರಶ್ನೆ ಮೂಡಿದ್ದು ರಾಜೀವ ಪಿಕಳೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಡಿವೈಎಸ್ಪಿ, ಸಿಪಿಐ ಪೋಲಿಸ್ ಇಲಾಖೆಯ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ಕೈಗೊಂಡಿದ್ದು ನಂತರ ವಿವರ ಮಾಹಿತಿ ತಿಳಿದು ಬರಬೇಕಿದೆ